ಪ್ರತೀಕಾರದ ತಿರುವು

ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವ ಜೋಡಿ ಕವಿತಾ ಹಾಗೂ ರಮೇಶ, ಭಾನುವಾರ ಬೆಳಿಗ್ಗೆ ಬಾಳೆಖಾನ್ ಎಸ್ಟೇಟ್ ನ ಬಸ್ ಸ್ಟ್ಯಾಂಡ್ ನಲ್ಲಿ ಬಸ್ಗಾಗಿ ಕಾಯುತ್ತಾ ನಿಂತಿದ್ದರು. ವಾರವಿಡೀ ಎಸ್ಟೇಟ್ ನಲ್ಲಿ ಕೆಲಸ ಮಾಡಿ ಭಾನುವಾರದ ಸಂತೆಗಾಗಿ ಸುತ್ತೂರು ಪೇಟೆಗೆ ಹೋಗಲು ಅಲ್ಲಿನ ಜನರಿಗೆ ಇದ್ದ ಒಂದೇ ವ್ಯವಸ್ಥೆ ಎಂದರೆ ಅದು ಸಹಕಾರ ಸಾರಿಗೆ ಬಸ್.ಈ ಬಸ್ಸು ಅಲ್ಲಿನ ಜನರ ಸುಖ-ದುಃಖಗಳಲ್ಲಿ ಪಾಲು ಪಡೆದಿತ್ತು. ಮದುವೆಗೆ, ಅನಾರೋಗ್ಯದವರನ್ನು ಆಸ್ಪತ್ರೆಗೆ ಸೇರಿಸಲು ಹೀಗೆ ಎಲ್ಲದಕ್ಕೂ ಈ ಬಸ್ಸನ್ನೇ ಅವಲಂಬಿಸಿದ್ದರು.

Read More

ವದಂತಿ

ಅಂದು 2016 ನೇ ಇಸವಿ ಜೂಲೈ ತಿಂಗಳ 28 ನೆ ತಾರೀಖು, ಕಲ್ಲುಗುಡ್ಡ ಸಮೀಪದ ಕೆಂಜಾಲು ಎಂಬ ಊರಿನಲ್ಲಿ ಸುಮಾರು ರಾತ್ರಿ 8 ಗಂಟೆಯಾಗಿರಬಹುದು, ಗುಡುಗು ಮಿಂಚಿನ ಧಾರಕಾರ ಮಳೆಯಾಗುತಿತ್ತು, ಬಿಟ್ಟು ಬಿಡದೆ ಮಳೆ ಜೋರಾಗಿ ಸುರಿಯುತ್ತಲೇ ಇರುವ ಮಧ್ಯೆ ಒಬ್ಬಳು ಹೆಂಗಸು ಜೋರಾಗಿ ಅಳುತ್ತಾ ಓಡಿಬರುವ ಸದ್ದು ಶಂಕ್ರಪ್ಪನ ಮನೆ ಹತ್ತಿರ ಕೇಳಿಸುತ್ತಿತ್ತು. ಆಗಷ್ಟೇ ಮನೆ ಸೇರಿದ್ದ ಶಂಕ್ರಪ್ಪ ಚಳಿ ಕಾಯಿಸಲು ಒಲೆಯ ಮುಂದೆ ಕೂತಿದ್ದ ಇವನ ಕಿವಿಗಳಿಗೆ ಹೆಂಗಸೊಬ್ಬಳು ಜೋರಾಗಿ ಬೊಬ್ಬೆ ಹಾಕುತ್ತಾ ಬರುತ್ತಿರುವುದು

Read More

ವಿಕ್ರಮ ಬೇತಾಳ

ಎಂದಿನಂತೆ ರಾಜ ವಿಕ್ರಮಾದಿತ್ಯ ಹೆಣವನ್ನು ಹುಡುಕುತ್ತಾ ಕಗ್ಗತ್ತಲ ದಟ್ಟಡವಿಯಲ್ಲಿ ಹೊರಟಿದ್ದ. ದೂರದಲ್ಲಿ ಒಂದು ಮರಕ್ಕೆ ಜೋತು ಬಿದ್ದ ಹೆಣವನ್ನು ನೋಡಿದ. ಅದನ್ನು ಕೆಳಗಿಳಿಸಿ ಹೆಗಲ ಮೇಲೆ ಹಾಕಿಕೊಂಡು ಸ್ವಲ್ಪ ದೂರ ಬಂದಾಗ ಬೇತಾಳ ಗಹಗಹಿಸಿ ನಗಲಾರಂಬಿಸಿತು. ರಾಜನಿಗೆ ಬೇತಾಳ ತಾನು ಕೇಳುವ ಪ್ರಶ್ನೆಗೆ ಸರಿಯಾದ ಉತ್ತರ ಹೇಳಿದರೆ ಮಾತ್ರ ರಾಜನ ದಾರಿ ಸುಗಮವಾಗುವುದೆಂದು, ತಪ್ಪು ಉತ್ತರ ನೀಡಿದರೆ ತಲೆ ಒಡೆದು ನೂರು ಚುರುಗಳಾಗುವುದೆಂದು ಹೇಳಿ ಕಥೆ ಶುರು ಮಾಡಿದ. ಅದೊಂದು ಗಿಡುಗ ಹಸಿವಿನಿಂದ ತುಂಬಾ ಬಳಲಿತ್ತು. ತನ್ನ

Read More
Back