ವದಂತಿ
ಅಂದು 2016 ನೇ ಇಸವಿ ಜೂಲೈ ತಿಂಗಳ 28 ನೆ ತಾರೀಖು, ಕಲ್ಲುಗುಡ್ಡ ಸಮೀಪದ ಕೆಂಜಾಲು ಎಂಬ ಊರಿನಲ್ಲಿ ಸುಮಾರು ರಾತ್ರಿ 8 ಗಂಟೆಯಾಗಿರಬಹುದು, ಗುಡುಗು ಮಿಂಚಿನ ಧಾರಕಾರ ಮಳೆಯಾಗುತಿತ್ತು, ಬಿಟ್ಟು ಬಿಡದೆ ಮಳೆ ಜೋರಾಗಿ ಸುರಿಯುತ್ತಲೇ ಇರುವ ಮಧ್ಯೆ ಒಬ್ಬಳು ಹೆಂಗಸು ಜೋರಾಗಿ ಅಳುತ್ತಾ ಓಡಿಬರುವ ಸದ್ದು ಶಂಕ್ರಪ್ಪನ ಮನೆ ಹತ್ತಿರ ಕೇಳಿಸುತ್ತಿತ್ತು. ಆಗಷ್ಟೇ ಮನೆ ಸೇರಿದ್ದ ಶಂಕ್ರಪ್ಪ ಚಳಿ ಕಾಯಿಸಲು ಒಲೆಯ ಮುಂದೆ ಕೂತಿದ್ದ ಇವನ ಕಿವಿಗಳಿಗೆ ಹೆಂಗಸೊಬ್ಬಳು ಜೋರಾಗಿ ಬೊಬ್ಬೆ ಹಾಕುತ್ತಾ ಬರುತ್ತಿರುವುದು